Wednesday, 9 October 2013

ಸೌಜನ್ಯ.... ನಮ್ಮನ್ನು ಕ್ಷಮಿಸು. ನಮ್ಮನ್ನು ಬೆಂಬಲಿಸಿದ ಮಿತ್ರರೇ.. ನಮ್ಮ ಮೇಲೆ ಕ್ಷಮೆ ಇರಲಿ.


ಆತ್ಮೀಯ ಮಿತ್ರರೇ

ಇಂದಿಗೆ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆಯಾಗಿ ಒಂದು ವರ್ಷವಾಯ್ತು. ನಾವೂ ನೀವೂ ನಮ್ಮಿಂದ ಸಾಧ್ಯವಾಗುವಷ್ಟು ಈ ಪೇಜ್'ನ ಮೂಲಕ ನ್ಯಾಯ ಒದಗಿಸಿಕೊಡಲು ಪ್ರಯತ್ನ ಪಟ್ಟಿದ್ದೇವೆ. 

ಈ ಪೇಜಿನ ಕೆಲ ಸಮಚಿತ್ತದ ಮಿತ್ರರನ್ನು ಕೂಡಿಕೊಂಡು ಫೆಬ್ರವರಿ 4ರಂದು ಬೆಳ್ತಂಗಡಿ ತಾಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದೆವು. ಕೆಲ ಪತ್ರಕರ್ತರಿಗೆ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಪತ್ರಿಕೆಗಳಲ್ಲಿ, ಅಂತರ್ಜಾಲ ಪುಟಗಳಲ್ಲಿ ಬರುವಂತೆ ಸಾಧ್ಯವಾದಷ್ಟು ಪ್ರಯತ್ನಿಸಿದ್ದೇವೆ. ಆದರೆ ನ್ಯಾಯ ದೊರಕಿಸಿ ಕೊಡಲು ವಿಫಲರಾದೆವು.

ನಮ್ಮ ಈ ವ್ಯವಸ್ಥೆಯೇ ಇಂತದ್ದು, ಬದಲಾಗುವಂತದ್ದಲ್ಲ. ನಾವು ಬಡವರು... ನ್ಯಾಯ ಕೇಳಬಾರದು ಅನ್ನೋ ಸಾಮಾನ್ಯ ತಿಳುವಳಿಕೆ ನಮಗಿರ್ಲಿಲ್ಲ ನೋಡಿ. ಮಾಡಿದ ಪ್ರಯತ್ನಗಳೆಲ್ಲಾ ಫಲಕೊಡದೆ ಹೋಯ್ತು. ಈ ಬಗ್ಗೆ ನಮಗೆ ಅಪಾರ ನೋವಿದೆ. ನಾವು ಸೋತೆವು. ಸೌಜನ್ಯ ನಮ್ಮನ್ನು ಕ್ಷಮಿಸು. ನಮ್ಮನ್ನು ಬೆಂಬಲಿಸಿದ ಮಿತ್ರರೇ.. ನಮ್ಮ ಮೇಲೆ ಕ್ಷಮೆ ಇರಲಿ.

ಸೌಜನ್ಯಾಳ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ಶ್ರೀರಾಮನಲ್ಲಿ ಪ್ರಾರ್ಥಿಸೋಣ

Admin

No comments:

Post a Comment