Thursday, 3 January 2013

ಮಂಗಳೂರು ರೆಸಾರ್ಟ್ ಹುಡುಗಿಯರ ಕಂಡು ಕರಗಿದ ಮಂಗಳೂರಿನ ಜನ ಹೃದಯಗಳು, ನಮ್ಮ ಮನೆಮಗಳು ಸೌಜನ್ಯಳಿಗೂ ಮಿಡಿದಿದ್ದರೆ ಎಷ್ಟು ಚೆನ್ನಾಗಿರುತಿತ್ತು?


ಪ್ರೀತಿಯ ಮಂಗಳೂರಿನ ಜನತೆ,

ನಾವೇಕೆ  ಈ ರೀತಿ? ನಮ್ಮ ಮನೆಯಲ್ಲಿ ಸೂತಕವಿದ್ದರೂ ಪರಮನೆಯ ಸಾವಿಗೆ ಕಣ್ಣೀರು ಸುರಿಸುವ ಹೃದಯ ವೈಶಾಲ್ಯತೆ ನಮಗೇಕೆ? ಊರ ಉಸಾಬರಿ ನಮಗ್ಯಾಕೆ ಅಂತ ಸುಮ್ಮನೆ ಕೂರುವಂಥ ಕಾಲ ಇದಲ್ಲ.  ಅದನ್ನು ಒಪ್ಪಲೇ ಬೇಕು. ಆದರೆ, ಇತ್ತೀಚೆಗೆ ನಾವು ತೀರ ಸ್ವಂತಿಕೆಯ ಎಲ್ಲೆ ಮೀರಿ ಹೋಗುತ್ತಿದ್ದೇವೆ. ನೆರೆಮನೆ ಸುಡುತ್ತಿದ್ದರೂ ಮಾತಾಡದೆ, TV ಯಲ್ಲಿ ಕ್ರೈಂ ಸ್ಟೋರಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅಂಥ ಮನೋಸ್ಥಿಥಿ ನಮ್ಮದು. ಮಾನವೀಯತೆ ಎಂಬುದು ಮಾದ್ಯಮಗಳು ಬಿತ್ತರಿಸುವ ಸುದ್ದಿಯನ್ನು ನೋಡಿ ಉಕ್ಕಿ ಹರಿಯುತ್ತದೆ ಹೊರತು ವಾಸ್ತವತೆಯನ್ನರಿತಲ್ಲ. ಮಂಗಳೂರು ಖಂಡಿತವಾಗಿಯೂ ಬದಲಾಗಿದೆ ಎನ್ನಲು ಇತ್ತೀಚೆಗೆ ನಡೆದ Home Stay ಗಲಾಟೆ ಹಾಗೂ  ಸೌಜನ್ಯ ಸಾವಿನ ಪ್ರಕರಣದ ಬಗ್ಗೆ ಮಂಗಳೂರಿನ ಜನತೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯೇ ಸಾಕು.

ರಾಜಕೀಯ ಪ್ರೇರಿತ 'ಮಂಗಳೂರು ರೆಸಾರ್ಟ್ ಗಲಾಟೆ'ಯಲ್ಲಿ ಸಿರಿವಂತ ಮನೆಯ ಹೆಣ್ಣುಮಕ್ಕಳಿಗಾದ ಅನ್ಯಾಯಕ್ಕೋಸ್ಕರ ಅದೆಷ್ಟು ಮಂದಿ ಬೀದಿಗಿಳಿಯಲಿಲ್ಲಾ? Facebook ತುಂಬಾ ಅದೇನೂ ಸ್ಟೇಟಸ್ Update ಗಳು, ಅದೇನೂ ಅಕ್ರೋಶ? ದಾಳಿ ಮಾಡಿದವರನ್ನು ಕೈಗೆ ಕೊಟ್ಟಿದ್ದರೆ ಕೊಂದು ಬಿಡುತ್ತಿದ್ದರೋ ಏನೋ... ಆ ರೀತಿ ಇತ್ತು ಪ್ರತಿಭಟನೆಯ ಜೋರು.


'ವಿದ್ಯಾವಂತರ ನಾಡು' ಎಂಬ ಹಣೆಪಟ್ಟಿ ಕಟ್ಟಿಕೊಂಡು ಬೀಗುವ ಮಂಗಳೂರಿನ ಜನತೆಯ Hypocricy ಯನ್ನು ಮೆಚ್ಚಲೇ ಬೇಕು. ಯಾವನೋ ಒಬ್ಬ DJ, ಶೋಕಿಗಾಗಿ, ಮೋಜಿಗಾಗಿ ಪರವಾನಿಗೆ ಇಲ್ಲದ ಕಟ್ಟಡವೊಂದರಲ್ಲಿ ರಾತ್ರಿ ಕೆಲ ಹೆಸರಾಂತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿನಿಯರಯರ ಕೂಡಿ ಹಾಕಿ Birthday celebrate ಮಾಡಿದ್ದನ್ನು ಸಂಘಟನೆಯೊಂದು ಆಕ್ಷೇಪಿಸಿದ್ದು ಮಹಾಪರಾಧ ಆಗಿತ್ತು ನಿಮಗೆಲ್ಲರಿಗೂ. ನೀವು ಮಾಡಿದ್ದು, ಬೀದಿಗಿಳಿದಿದ್ದು, ಹುಡುಗಿಯರ ಪರವಾಗಿ ನಿಂತದ್ದು ಎಲ್ಲವೂ ಸರಿ. ಪ್ರತಿಯೊಬ್ಬ ಮಂಗಳೂರಿನ ನಾಗರೀಕನು ಮಾಡಬೇಕಾದ ಕೆಲಸವನ್ನೇ ಮಾಡಿದ್ದೀರಾ. ಮಹಿಳೆಯರ ಮೇಲೆ ಕೈ ಎತ್ತುವುದು ಷಂಡತನದ ಪರಮಾವಧಿ ಎಂದು ಸಾರಿ ಸಾರಿ ದಿಲ್ಲಿಗೂ ಕೇಳುವ ಹಾಗೆ ಬೊಬ್ಬಿಟ್ಟಿದ್ದೂ ಆಯಿತು. ಆಗ ಅದೆಷ್ಟು ಮಹಿಳಾಪರರು, ಬುದ್ದಿಜೀವಿಗಳು ವಿಪರೀತ ಖಾಳಜಿ ತೋರಿಸುತ್ತ ಮಂಗಳೂರಿಗೆ ದೌಡಯಿಸಲಿಲ್ಲಾ? ಗೌರಿ ಲಂಕೇಶ್ ಅಂತೂ 'ದಾಳಿಕೋರರ ಧರ್ಮವನ್ನೇ' ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಳು. ಆಕೆಯ ಕೆಳಲಾಗದ, ಅವಾಚ್ಯ ಶಬ್ದಗಳನ್ನೇ ಜೋಡಿಸಿ ಮಾಡಿದ ಭಾಷಣ ಮಂಗಳೂರಿನ ಜನತೆಗೆ ಹಿತವಾಗಿ ಕೇಳಿಸಿತ್ತು. ಯಾರೂ ಏನನ್ನು ಅನ್ನಲಿಲ್ಲ. ಹೊರಗಿನವರನ್ನು ಬಿಡಿ, ಅಂದು ಮಂಗಳೂರಿಗೆ ಮಂಗಳೂರೇ ದಾಳಿಕೋರರ ವಿರುದ್ಧ ಎದ್ದು ನಿಂತಿತ್ತು. Canara, Agnes, St. Aloysius ಕಾಲೇಜು ವಿದ್ಯಾರ್ಥಿನಿಯರಂತೂ ರಾಷ್ಟ್ರೀಯ ಟೀವಿ ಚಾನೆಲ್ ಗಳ ಮುಂದೆ ಮಂಗಳೂರಿನ ಮಾನ-ಮರ್ಯಾದೆ ಮೂರು ಕಾಸಿಗೆ ಹಾರಾಜು ಹಾಕಿಬಿಟ್ರು. TV Channelಗಳೋ, ತನ್ನ TRP ಏರಿಸಲು ಎನೇಲ್ಲಾ ಕಸರತ್ತು ಮಾಡಿದವು. ಗೊತ್ತೇ ಇದೆ ನಿಮಗೆ. ಮಂಗಳೂರಿನ ನ್ಯೂಸ್ website Daiji World ಅಂತು ಆ ಘಟನೆಯನ್ನು RAPE ಎಂದು ಬಿಂಬಿಸಿತ್ತು. ಎಲ್ಲಿಯ RAPE ಎಲ್ಲಿಯ MOLESTATION? ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯಲಾರದ ಮಟ್ಟಿಗೆ ಬದಲಾಗಿದ್ದೇವೆ ನಾವು.

ಆದರೂ, ಆಗ ಎಲ್ಲೋ ಒಂದು ಕಡೆ ನಮ್ಮ ಮಂಗಳೂರಿನ ಜನತೆಯ ಬಗ್ಗೆ ಒಂದು ರೀತಿಯ ಗೌರವ ಮೂಡಿತ್ತು. ಮುಂದೆಲ್ಲಾದರೂ ಈ ರೀತಿಯ ಮಹಿಳಾ ಶೋಷಣೆಗಳು ನಡೆದರೆ ಇದೇ  ರೀತಿಯ ಬೆಂಬಲ ಸಿಗುವ ಅಪೇಕ್ಷೆಯ ಭರವಸೆ ಮೂಡಿತ್ತು.

ಮಂಗಳೂರು ರೆಸಾರ್ಟ್ ಗಲಾಟೆಯ ಬಿಸಿ ಆರಿದ ಕೂಡಲೇ, October ಲ್ಲಿ ಸಂಭವಿಸಿತು ನೋಡಿ, ೧೭ರ ಬಾಲೆ 'ಸೌಜನ್ಯಳ ಅತ್ಯಾಚಾರ ಹಾಗು ಕೊಲೆ'.

ಯಾರೆಲ್ಲಾ ಪ್ರತಿಭಟಿಸಿದರು? ಸೌಜನ್ಯಳ ಆತ್ಮಕ್ಕೆ ಶಾಂತಿ ಕೋರುತ್ತ ಅದೆಷ್ಟು ಕ್ಯಾಂಡಲ್ ದೀಪಗಳು ಉರಿದವು  ಮಂಗಳೂರಿನಲ್ಲಿ? St. Agnes, St. Aloysius  ಹಾಗೂ Canara ವಿದ್ಯಾರ್ಥಿಗಳು ಬೀದಿಗಿಳಿಯಲೇ ಇಲ್ಲ. ಯಾವ ಬುದ್ದಿಜೀವಿಯೂ ಮಂಗಳೂರಿನ ಕಡೆ ತಲೆ ಹಾಕಲಿಲ್ಲ. PFI, ವಿಮುಕ್ತಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ, ಸಂಘ ಪರಿವಾರ, Youth For Nation, ABVP , ಬಿಜೆಪಿ ಮಹಿಳಾ ಮೋರ್ಚ ಬಿಟ್ಟರೆ ಯಾರೂ ಸೌಜನ್ಯಳಿಗೂ ನ್ಯಾಯ ಕೊಡಿಸುವ ಮನಸ್ಸು ಮಾಡಲಿಲ್ಲ. ಎಂಥಾ ವಿಪರ್ಯಾಸ ನೋಡಿ. ನಮಗೆ 'ರೆಸಾರ್ಟ್ ದಾಳಿ'  ನಮ್ಮ ಮನೆಮಗಳ ಸಾವಿಗಿಂತ ಮಿಗಿಲಾಯಿತು. ಯಾವ Daiji World ಕೂಡ ಅದನ್ನು RAPE ಅನ್ನಲಿಲ್ಲ. ಅದನ್ನು ಖಂಡಿಸಿ ಲೇಖನಗಳ ಮಹಾಪೂರವನ್ನು ಹರಿಸಲಿಲ್ಲ.

ಒಮ್ಮೆ ರಾಜಕೀಯ, ಪಕ್ಷ, ಧರ್ಮ ಬಿಟ್ಟು ಆಚೆ ಬಂದು ಯೋಚಿಸಿ ನೋಡಿ...
.
ದಿಲ್ಲಿ ಅತ್ಯಾಚಾರದ ಬಲಿಪಶು 'ದಾಮಿನಿ', ಮಂಗಳೂರು ರೆಸಾರ್ಟ್ ಶೋಷನೆಗೊಳಗಾದ  ಹುಡುಗಿಯರ ಕಂಡು ಕರಗಿದ ಮಂಗಳೂರಿನ ಹೃದಯಗಳು, ನಮ್ಮ ಮನೆಮಗಳು ಸೌಜನ್ಯಳಿಗೂ ಮಿಡಿದಿದ್ದರೆ ಎಷ್ಟು ಚೆನ್ನಾಗಿರುತಿತ್ತು?

ಇಂತೀ
Justice For Kumari Sowjanya


No comments:

Post a Comment