Saturday 19 October 2013

ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹ





ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ಅ.21ರಂದು ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ, 21ಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧ‌ರಣಿ, ನ.1ರಂದು ಬೆಳ್ತಂಗಡಿ ತಾಲೂಕಿನ ಕನ್ನಡ ರಾಜ್ಯೋತ್ಸವ ಸಂದರ್ಭ ಕರಿಬಾವುಟ ಪ್ರದರ್ಶನ, ಮೊದಲ ವಾರದಲ್ಲಿ ಮಂಗಳೂರು-ಬೆಂಗಳೂರು ಕಾಲ್ನಡಿಗೆ ಜಾಥಾ, ಅನಂತರ ಅಮರಾಣಾಂತ ಉಪವಾಸ ಸತ್ಯಾಗ್ರಹ, ಬೆಳ್ತಂಗಡಿ ಬಂದ್‌, ಮೊದಲಾದ ಹ
ೋರಾಟ ನಡೆಸಲು ಸಿಪಿಎಂ ಪಕ್ಷ ನಿರ್ಧರಿಸಿದೆ.

ಶುಕ್ರವಾರ ಇಲ್ಲಿನ ತಾಲೂಕು ಕಚೇರಿ ಮೈದಾನದಲ್ಲಿ ಬಾಗೆಪಲ್ಲಿ ಮಾಜಿ ಶಾಸಕ, ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಜಿ. ವಿ. ಶ್ರೀರಾಮ ರೆಡ್ಡಿ ಅವರು ಸೌಜನ್ಯಾ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉಪವಾಸ ಸತ್ಯಾಗ್ರಹ ಉದ್ಘಾಟಿಸಿದರು.

ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ನಮ್ಮ ಹೋರಾಟ ವ್ಯಕ್ತಿ, ಸಂಸ್ಥೆಯ ವಿರುದ್ಧವಲ್ಲ. ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸಬೇಕು ಎಂದಷ್ಟೇ ಆಗಿದೆ. ಎಲ್ಲ ರಾಜಕೀಯ ಪಕ್ಷದವರೂ ಈ ಹೋರಾಟಕ್ಕೆ ಕೈ ಜೋಡಿಸಬೇಕು. ಸೌಜನ್ಯಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ನಾನು ಪ್ರಕರಣದಲ್ಲಿ ಕೈಯಾಡಿಸಿ ಹಾಳುಗೆಡಹಿಲ್ಲ. ಹಾಗೊಮ್ಮೆ ಸೌಜನ್ಯಾ ಮನೆಯವರೇ ಆರೋಪಿಸಿದರೆ ನಾನು ಹೋರಾಟದಿಂದ ಹಿಂದೆ ಸರಿಯುತ್ತೇನೆ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಎಂ. ಭಟ್‌, ಸೌಜನ್ಯಾ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಸಿಪಿಐಎಂ ತಾಲೂಕು ಅಧ್ಯಕ್ಷ ಶಿವಕುಮಾರ್‌, ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ, ಜೆಎಂಎಸ್‌ ಅಧ್ಯಕ್ಷೆ ಕಿರಣಪ್ರಭಾ, ಕಾರ್ಯದರ್ಶಿ ಕುಮಾರಿ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಮಧುಸೂದನ, ಕಾರ್ಯದರ್ಶಿ ಪ್ರಶಾಂತ್‌, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಪುಷ್ಪರಾಜ, ಕಾರ್ಯದರ್ಶಿ ಸುಕನ್ಯಾ, ಶೇಖರ್‌ ಎಲ್‌., ಪತ್ರಕರ್ತ ದೇವಿಪ್ರಸಾದ್‌ ಮೊದಲಾದವರು ಇದ್ದರು.

No comments:

Post a Comment