ಪುತ್ತೂರು (ಕುಂಬ್ರ) : ಉಜಿರೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾರನ್ನು ಅತ್ಯಾಚಾರಗೆ„ದು ಬರ್ಬರವಾಗಿ ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸಬೇಕಾದಲ್ಲಿ ಸರಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಿಬಿಐಗೆ ಒಪ್ಪಿಸದೇ ಇದ್ದಲ್ಲಿ ವಿಹಿಂಪ ಹಾಗೂ ಬಜರಂಗದಳ ಸಂಘಟನೆ ವತಿಯಿಂದ ಕರ್ನಾಟಕ ರಾಜ್ಯ ಬಂದ್ ಪ್ರತಿಭಟನೆ ಮಾಡಲು ನಾವು ಸಿದ್ದ ಎಂದು ನಮೋ ಭಾರತ್ ಸಂಘಟನೆಯ ಮುಖಂಡ ಅರುಣ್ಕುಮಾರ್ ಪುತ್ತಿಲ ಹೇಳಿದರು.
ಅವರು ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಎದುರು ಸೌಜನ್ಯಾ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳ ಸಂಘಟನೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮತನಾಡಿದರು.
ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ಹರಾಟಗಳು ನಡೆಯುತ್ತಿದೆ. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿ ರೋಪಿಗಳನ್ನು ಬಂಧಿಸಬೇಕಾದ ಸರಕಾರ ಪೊಲೀಸ್ ಇಲಾಖೆ ಓರ್ವ ಮಾನಸಿಕ ಅಸ್ವಸ್ಥನನ್ನು ಬಂಧಿಸಿ ಕೈತೊಳೆದುಕೊಂಡಿದೆ.
ಇದು ಖಂಡನೀಯವಾಗಿದೆ.
ರಾಜ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ನಾವು ಯಾವುದೇ ಧಾರ್ಮಿಕ ಕ್ಷೇತ್ರದ ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ. ಸೌಜನ್ಯಾ ಕೊಲೆ ಪ್ರರಕರಣದ ಕುರಿತು ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯ ಮಾಡುತ್ತಿದ್ದೇವೆ. ಸರಕಾರ ಈಗಾಗಲೇ ಸಿಒಡಿ ತನಿಖೆಗೆ ಆದೇಶ ಮಾಡಿ ತನಿಖೆ ನಡೆಯುತ್ತಿದೆ. ಈ ತನಿಖೆಯ ಮೇಲೆ ಜನತೆಗೆ ವಿಶ್ವಾಸವಿಲ್ಲ.
ಸಿಬಿಐಗೆ ಒಪ್ಪಿಸಿದ್ದಲ್ಲಿ ಮತ್ರ ಸತ್ಯ ಬಹಿರಂಗವಾಗುತ್ತದೆ. ಮಹಿಳೆಯರ ದೆ„ರ್ಯದಿಂದ ಬದುಕುವ ವಾತಾವರಣ ಇಲ್ಲಿ ನಿರ್ಮಾಣವಾಗಬೇಕು,
ಮಹಿಳೆಯರ ಮೇಲೆ ಅತ್ಯಾಚಾರ ನಡೆದರೆ ಅದರ ವಿರುದ್ದ ಎಲ್ಲರೂ ಸಂಘಟಿತವಾಗಿ ಹೋರಾಟ ನಡೆಸಬೇಕು. ಸರಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಮಾತƒಮಂಡಳಿ ಅಧ್ಯಕ್ಷೆ ಪ್ರೇಮಲತಾ ಮಾತನಾಡಿ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ಅಧಿಕವಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಪರಿಣಾಮ ಹಿಂದೂ ಸಂಸ್ಕೃತಿ jaನರಲ್ಲಿ ಕ್ಷೀಣಿಸುತ್ತಿದೆ. ಇದರ ಪ್ರಭಾವವಾಗಿ ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ಅದಿಕವಾಗುತ್ತಿದೆ. ಸೌಜನ್ಯ ಕೊಲೆ ಪ್ರಕರಣದ ಕುರಿತು ಸರಕಾರ ಸಿಬಿಐಗೆ ಒಪ್ಪಿಸಬೇಕು ಎಂದು ಹೇಳಿದರು.
ಬಜರಂಗದಳ ಮುಖಂಡ ಮುರಳೀ ಕೃಷ್ಣ ಹಸಂತಡ್ಕ ಮಾತನಾಡಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಸಮಾಜವನ್ನು ಒಡೆಯುವ ಕೆಲಸ ಕೆಲವರಿಂದ ಆಗುತ್ತಿದೆ. ಸೌಜನ್ಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇದು ಘೋರ ಕೃತ್ಯವಾಗಿದೆ. ಆರೋಪಗಳಿಗೆ ಉಗ್ರ ಶಿಕ್ಷೆಯಾಗಲೇ ಬೇಕು. ಕಾನೂನಿನಡಿಯಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಈ ಪ್ರಕರಣದಲ್ಲಿ ನ್ಯಾಯ ಸಿಗುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಬಿಎಂಎಸ್ Auto ಚಾಲಕ ಮಾಲಕ ಸಂಘದ ಮುಖಂಡ ಚಂದ್ರಶೇಖರ್ ಮಾತನಾಡಿ ನಮ್ಮ ದೇಶದಲ್ಲಿ ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಇಲ್ಲ.
ತಪ್ಪು ಮಾಡಿದವ ಎಷ್ಟೇ ಪ್ರಭಾವಶಾಲಿಯಾದರೂ ಶಿಕ್ಷೆಗೊಳಪಡಿಸಬೇಕು ಎಂದರು.
ಬಜರಂಗದಳದ ದಿನೇಶ್ಕುಮಾರ್ ಜೈನ್ ಮಾತನಾಡಿ ಸೌಜನ್ಯ ಹತ್ಯಾಪ್ರಕರಣದ ಸೂತಕದ ಚಾಯೆ ಇಡೀ ರಾಜ್ಯದಲ್ಲಿ ಆವರಿಸಿದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ ಪ್ರಕರಣದ ಸತ್ಯಾಂಶ ಹೊರಬೀಳಲಿದೆ. ತಿಮರೋಡಿಯಂತ ಓರ್ವ ಹಿಂದೂ ಮುಖಂಡ ಈ ಪ್ರಕರಣದ ಕುರಿತು ದ್ವನಿ ಎತ್ತುವ ಮೂಲಕ ಇಡೀ ರಾಜ್ಯದಲ್ಲಿ ಪ್ರತಿದ್ವನಿಸುವ ಹಾಗೆ ಮಾಡಿದ್ದರೆ. ತಿಮರೋಡಿಯಂತ ಮಂದಿ ನಮ್ಮೊಳಗೆ ಹುಟ್ಟಬೇಕಿದೆ. ಪ್ರತೀ ಗ್ರಾಮದಲ್ಲಿ ಓರ್ವ ತಿಮರೋಡಿ ಇರಬೇಕು ಎಂದು ಹೇಳಿದರು. ಯಾವ ಧರ್ಮದ ಹೆಣ್ಣು ಮಗಳ ಮೇಲೆ ಅತ್ಯಾಚಾರ ದೌರ್ಜನ್ಯ ನಡೆದರೂ ನವೆಲ್ಲರೂ ಒಗ್ಗಟ್ಟಾಗಿ ಅದರ ವಿರುದ್ದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
ಗರ್ಭಕೋಶಕ್ಕೆ ಮಣ್ಣು ಹಾಕಿದ್ದರು ಪ್ರತಿಭಟನೆಯಲ್ಲಿ ಮƒತ ಸೌಜನ್ಯಾರ ತಾಯಿ ಕುಸುಮಾವತಿ ಹಾಗೂ ತಂದೆ ಚಂದಪ್ಪ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ತಾಯಿ ಕುಸುಮಾವತಿ ಕಾಲೇಜಿಗೆ ಹೋಗಿ ಮಧ್ಯಾಹ್ನ ಮನೆಗೆ ಬರುತ್ತೇನೆ ಎಂದು ಹೇಳಿ ತೆರಳಿದ ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಂದು ಹಾಕಿ ಆಕೆಯ ಗರ್ಭಕೋಶಕ್ಕೆ ಮಣ್ಣು ತುಂಬಿದ್ದರು. ಇಂತಹ ಪಾತಕಿಗಳು ನಮ್ಮ ಸಮಾಜದಲ್ಲಿದ್ದು ಅವರ ಅಟ್ಟಹಾಸಕ್ಕೆ ನನ್ನ ಮಗಳು ಬಲಿಯಾದಳು.
ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಎಂದು ಬಿಕ್ಕಿಬಿಕ್ಕಿ ಅತ್ತರು. ಈ ಸಂದರ್ಭದಲ್ಲಿ ಹಲವು ಮಂದಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.
ನ್ಯಾಯವಾದಿ ಮಾಧವ ಪೂಜಾರಿ, ಹಿಂದೂ ಮುಂದಾಳು ಡೀಕಯ್ಯ ಪೆರೊÌàಡಿ, ವಿಹಿಂಪ ಮುಖಂಡ ಕೃಷ್ಣಪ್ರಸಾದ್, ಹಾಗೂ ಮಾತƒವಾಹಿನಿ, ದುರ್ಗಾವಾಹಿನಿ, ಸ್ನೇಹಸಂಗಮ Auto ಚಾಲಕ ಮಾಲಕ ಸಂಘ, ಬಿಎಂಎಸ್ Auto ಚಾಲಕ ಮಾಲಕ ಸಂಘ, ಎಬಿವಿಪಿ ಪ್ರತಿಭಟನೆಯಲ್ಲಿ ಭಾಗಹಿಸಿದ್ದವು. ಪ್ರತಿಭಟನಾ ಸಭೆಗೆ ಮೊದಲು ದರ್ಬೆ ವೃತ್ತದಿಂದ ಎ.ಸಿ. ಕಚೇರಿವರೆಗೆ ಮೌನ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಪುತ್ತೂರು ನಗರ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಸೌಜನ್ಯಾರ ತಾಯಿ ಮಾತನಾಡಿದರು.

No comments:
Post a Comment