Saturday, 26 October 2013

ಸೌಜನ್ಯ ಪ್ರಕರಣ: ಸಿಬಿಐಗೆ ನೀಡಲು ಆಗ್ರಹ


ಸುಳ್ಯ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುವುದನ್ನು ಖಂಡಿಸಿ ಹಾಗು ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ವೇದಿಕೆ ವತಿಯಿಂದ ಶನಿವಾರ ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ನಂಬಿಕೆಗಳನ್ನು ಸಂಶಯಿಸುವುದು ಹಾಗೂ ಸಂಶಯಗಳನ್ನು ನಂಬುವುದು ಸರಿಯಲ್ಲ, ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅದೇ ರೀತಿ ಶ್ರದ್ಧಾ ಭಕ್ತಿಯ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ನಡೆಸುವ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಹೇಳಿ ದರು. 
ಸಮಿತಿ ಸಂಚಾಲಕ ಎನ್.ಎ. ರಾಮಚಂದ್ರ, ಅಧ್ಯಕ್ಷ ಜಯ ರಾಮ ಹಾಡಿಕಲ್ಲು, ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಕೆ.ಎಂ.ಮುಸ್ತಫ, ಡಾ. ಹರಿಪ್ರಸಾದ್ ಮಾತನಾಡಿದರು. ಬೂಡು ರಾಧಾಕೃಷ್ಣ ರೈ, ಚಂದ್ರಾ ಕೋಲ್ಚಾರ್, ಪಿ.ಸಿ.ಜಯರಾಮ, ಭವಾನಿಶಂಕರ ಅಡ್ತಲೆ ಇದ್ದರು. ಪ್ರತಿಭಟನೆಗೂ ಮುನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರ ವಣಿಗೆ ನಡೆಯಿತು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

No comments:

Post a Comment