Wednesday, 26 December 2012

ಎಸ್‌ಎಂಎಸ್ ರವಾನೆ: ನಾ.ಸೇ.ಟ್ರಸ್ಟ್ ಅಧ್ಯಕ್ಷರಿಗೆ ನಿರೀಕ್ಷಣಾ ಜಾಮೀನು.


ಗುರುವಾಯನಕೆರೆ: ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಮೇಲೆ ಎಸ್‌ಎಂಎಸ್ ರವಾನೆ ಸಂಬಂಧ ದಾಖಲಾದ ದೂರಿಗೆ ದ.ಕ. ಜಿಲ್ಲಾ ಪ್ರಧಾನ ಸೆಶನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಕೇಶ್ ಕುಮಾರ್ ಎಂಬವರು ಎಸ್‌ಎಂಎಸ್ ರವಾನೆ ಸಂಬಂಧ ನೀಡಿದ ದೂರಿನ ಪ್ರಕಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸೆಶನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ನಾಯಕ್‌ರು ಅರ್ಜಿ ಸಲ್ಲಿಸಿದ್ದು ತಾ.೧೯.೧೨.೨೦೧೨ರಂದು ನ್ಯಾಯಾಲಯ ಶರ್ತಗಳೊಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ನಾಗರಿಕಾ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್ ತಿಳಿಸಿದ್ದಾರೆ.

I.ಖಿ. ಂಛಿಣ ನ ಸೆಕ್ಷನ್ ೬೬ಂs ದುರುಪಯೋಗದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿರುವುದನ್ನೂ ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ಠಾಣಾಧಿಕಾರಿಗಳು ಮೇಲಧಿಕಾರಿಗಳ ಅನುಮತಿ ಇಲ್ಲದೆ ಈ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸುವಂತಿಲ್ಲವೆಂಬುದನ್ನೂ ಸಂವಹನ ಮಾದ್ಯಮದ (ಮೊಬೈಲ್, ಇಂಟರ್‌ನೆಟ್) ಮೂಲಕ ಸಂವಹನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ಯ್ರದ ವ್ಯಾಪ್ತಿಗೆ ಬರುತ್ತದೆ ಎಂಬುದೂ ಇಲ್ಲಿ ಉಲ್ಲೇಖನೀಯವೆಂದು ಅವರು ಹೇಳಿದ್ದಾರೆ.

No comments:

Post a Comment